Purandara Jayanthi and Dasothsava 2018

Triveni would like to express our sincere gratitude to you all for attending our Purandara Jayanti and Dasotsava Event, held at the Berlin Temple this past weekend. We would especially like to thank our participants and their families for their continued patronage of this event! We would also like to extend our thank you to Dr. Bhavani Prakash and her esteemed accompanying artists for giving us a memorable recital! Energized by the success of PJD, we will start preparing for our next event which is Ugadi, to be held in April; details to be furnished soon!

Warm regards,

Triveni Committee 

From our patrons

|| ದಾಸರೆಂದರೆ ಪುರಂದರದಾಸರಯ್ಯ ||
ಆಶ್ಚರ್ಯ ಮತ್ತು ಆನಂದತಂದ ಪುರಂದರದಾಸೋತ್ಸವ ನಿನ್ನೆ ಬರ್ಲಿನ್ ದೇವಾಲಯದಲ್ಲಿ ನಡೆಯಿತು. ನಿನ್ನೆ ಭಯಂಕರ ಮಳೆ ಆದರೂ ಸಾಕಷ್ಟುಜನಸೇರಿದ್ದರು. ಮಕ್ಕಳಕಾರ್ಯಕ್ರಮ ಸುಗಮವಾಗಿ ನಡೆಯಿತು. ಮಕ್ಕಳು ಬಹಳ ಪರಿಶ್ರಮಪಟ್ಟು ಕಲಿತಿದ್ದ ದೇವರನಾಮಗಳನ್ನುಹಾಡುವಾಗ ಸಾಹಿತ್ಯ ದೋಷಗಳನ್ನು ನಾವೆಲ್ಲರೂ ಮರೆತುಬಿಡುವಷ್ಟು ಚೆನ್ನಾಗಿಹಾಡಿದರು.
ದೊಡ್ಡವರ ಕಾರ್ಯಕ್ರಮವನ್ನು  ಅಗ್ರಜರು ಸಿ,ಎಂ. ರಾಮಕೃಷ್ಣರವರು ಶುರುಮಾಡಿದರು. ನಾವೆಲ್ಲರೂ ಜೀವನದಲ್ಲಿ ಸಾಧಾರಣವಾಗಿ ಮಾಡುವ ತಪ್ಪುಗಳನ್ನು ಅರಿತುಕೊಂಡು ತಿದ್ದಿಕೊಳ್ಳಿರಿ ಎಂದು ಎತ್ತಿ ತೋರಿಸುವ ಪುರಂದರದಾಸರ ಕೃತಿಯನ್ನು ಹಾಡಿದರು. ಅದು ನಮ್ಮೆಲ್ಲರಿಗೂ ಎಚ್ಚರಿಕೆ ಮಾಡಿತು. ಶಿವರಂಜನಿ ಮತ್ತು ಅವರ ಶಿಷ್ಯವೃಂದದ ಗಾಯನ ಚೆನ್ನಾಗಿತ್ತು.ಪ್ರಾಚೀನಕೃತಿ ಮತ್ತು ಆಜ್ಞಾತ ಪಕ್ಕವಾದ್ಯ! ಕೇಳಲು ಚೆನ್ನಾಗಿತ್ತು. ತ್ರಿವೇಣಿ ಸಂಗದ ಪೂರ್ವಪ್ರಸಿದ್ದ ಗಾಯಕ ಮತ್ತು ಗಾಯಕಿಯರು  ಒಂಟಿಯಾಗಿ, ಜೊತೆಯಾಗಿ ಮತ್ತು ಗುಂಪಾಗಿ ಚೆನ್ನಾಗಿ ಹಾಡಿದರು. ಕೃತಿಕಾ [ಸಾಂಸ್ಕೃತಿಕ ಕಾರ್ಯದರ್ಶಿ] ಬಹಳ ಚೆನ್ನಾಗಿ "ಆಡಿಸಿದಳೆ ಯಶೋದ" ಪುರಂದರಕೃತಿಯನ್ನು ಹಾಡಿದಳು. ದೇವರಿಗೆ ಮಂಗಳಾರತಿ ಮತ್ತು ಭೋಜನ ಪ್ರಮುಖ ಗಾಯಕಿಯ ಗಾಯನದ ಮುನ್ನ ನಡೆಯಿತು. [ದೈವಸಂಕಲ್ಪ] ಪ್ರಮುಖ ಗಾಯಕಿ ಮತ್ತು ಆಕೆಯ ವಾದ್ಯ ಗೋಷ್ಠಿ ಸಮೇತ ಬಹಳ ಚೆನ್ನಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಆದದ್ದೆಲ್ಲಾ ಒಳಿತೆ ಆಯಿತು ಶ್ರೀಪುರಂದರಸೇವೆಗೆ !
ಕಿರು ಬರವಣಿಗೆಗೆ ಕಾರಣ--ನಮ್ಮ ತ್ರಿವೇಣಿ ಸಂಗದ ಕಾರ್ಯಕರ್ತರೆಲ್ಲರೂ ಮಹಿಳೆಯರು, ಅವರೆಲ್ಲರೂ
ಕಾರ್ಯಕ್ರಮದ ಕಾರ್ಯನಿರ್ವಹಣೆಯಲ್ಲಿದ್ದಾಗ ಮಹನೀಯರೆಲ್ಲರೂ ಭೋಜನವನ್ನು ನಮಗೆ ಬಡಿಸಿದರು!
ಪುಟ್ಟಮ್ಮ-. ಹೇಮ- ಕೃತಿಕಾ ಮತ್ತು ಸಂಗದ ಸದಸ್ಯನಿಯರಿಗೆಲ್ಲಾ ಅಭಿನಂದನೆಗಳು
ಸುಮತಿಸೇನ.


My wife, daughter and I attended the function and thoroughly enjoyed the program. Thank you very much for such a delightful medley of kirtanas.

God bless you all

Venkataramana